Kannada Duniya

ಬಿಳಿ ಜೀನ್ಸ್ ಜೊತೆ ಟ್ರೈ ಮಾಡಿ ಈ ಟಾಪ್….!

ಜೀನ್ಸ್ ಈಗ ಎಲ್ಲರಿಗೂ ಇಷ್ಟವಾಗುವ ಉಡುಗೆ. ಜೀನ್ಸ್ ಅನೇಕ ಹುಡುಗಿಯರಿಗೆ ಆರಾಮವೆನಿಸುತ್ತದೆ. ಸಾಮಾನ್ಯವಾಗಿ ನೀಲಿ ಇಲ್ಲ ಕಪ್ಪು ಬಣ್ಣದ ಜೀನ್ಸ್ ಧರಿಸಲು ಹುಡುಗಿಯರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಳಿ ಬಣ್ಣದ ಜೀನ್ಸ್ ಫ್ಯಾಷನ್ ಆಗ್ತಾ ಇದೆ. ಬೇಸಿಗೆಯಲ್ಲಿ ಬಿಳಿ ಬಣ್ಣದ ಜೀನ್ಸ್ ತಂಪನೆಯ ಅನುಭವ ನೀಡುತ್ತದೆ. ಆದ್ರೆ ಬಿಳಿ ಜೀನ್ಸ್ ಮೇಲೆ ಯಾವ ಬಟ್ಟೆ ಧರಿಸೋದು ಎಂಬ ಪ್ರಶ್ನೆ ಅನೇಕರದ್ದು. ನೀಲಿ ಹಾಗೂ ಕಪ್ಪು ಜೀನ್ಸ್ ನಂತೆ ಎಲ್ಲ ಬಣ್ಣದ ಟಾಪ್ ಗೆ ಬಿಳಿ ಜೀನ್ಸ್ ಹೊಂದಿಕೆಯಾಗೋದಿಲ್ಲ.

ಈ ಬೇಸಿಗೆಯಲ್ಲಿ ನಿಮ್ಮ ಫ್ಯಾಷನ್ ಸ್ವಲ್ಪ ಭಿನ್ನವಾಗಿರಲಿ. ಹಾಗಾಗಿ ಬಿಳಿ ಜೀನ್ಸ್ ಜೊತೆ ಫ್ಲೋರಲ್ ಪ್ರಿಂಟ್ ನ ಬಲೂನ್ ಸಟೈಲ್ ನಲ್ಲಿರುವ ಟಾಪ್ ಹಾಕಿ. ಇದು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಬಿಳಿ ಜೀನ್ಸ್ ಜೊತೆ ತಿಳಿ ನೀಲಿ ಬಣ್ಣದ ಡೇನಿಮ್ ಶರ್ಟ್ ಧರಿಸಬಹುದು. ಇದ್ರ ಜೊತೆಗೆ ಮ್ಯಾಚಿಂಗ್ ಪರ್ಸ್ ಅಥವಾ ಆಭರಣ ಹಾಕಿದ್ರೆ ನಿಮ್ಮ ಲುಕ್ ಬದಲಾಗಲಿದೆ.

ಜೀನ್ಸ್ ಜೊತೆ ಜೆಕ್ ಪ್ರಿಂಟ್ ಶರ್ಟ್ ಅಥವಾ ಟಾಪ್ ಕೂಡ ಧರಿಸಬಹುದು. ಇದ್ರ ಜೊತೆಗೆ ಡಾರ್ಕ್ ಕಲರ್ ಶರ್ಟ್, ಕುರ್ತಾ ಅಥವಾ ಟಾಪ್ ಟ್ರೈ ಮಾಡಬಹುದು.

ಕಪ್ಪು ಬಣ್ಣದ ಸ್ಪೆಗಟಿ ಟಾಪ್ ಅಥವಾ ಶ್ರಗ್ ಜೊತೆ ಬಿಳಿ ಜೀನ್ಸ್ ಹಾಕಬಹುದು. ಇತ್ತೀಚಿನ ದಿನಗಳಲ್ಲಿ ಉದ್ದದ ಶ್ರಗ್ ಫ್ಯಾಷನ್ ಆಗಿದೆ. ಬಿಳಿ ಶ್ರಗ್ ಜೊತೆ ಯಾವುದೇ ಟಾಪ್ ಹೊಂದುತ್ತದೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...