Kannada Duniya

Paneer bhurji : ಪನೀರ್ ಬುರ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ…!

 

ಪನೀರ್ ಬುರ್ಜಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ. ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಭುರ್ಜಿ ಟ್ರೈ ಮಾಡಬಹುದು. ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಥವಾ ರೋಟಿ, ನಾನ್ ಮತ್ತು ಚಪಾತಿ ಜೊತೆಗೆ ಪನೀರ್ ಬುರ್ಜಿ ಒಳ್ಳೆಯ ಕಾಂಬಿನೇಷನ್. ಕೇವಲ ಹತ್ತೇ ನಿಮಿಷದಲ್ಲಿ ಝಟ್ ಫಟ್ ಅಂತಾ ಇದನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿ : 2 ಚಮಚ ಎಣ್ಣೆ, 1 ಚಮಚ ಜೀರಿಗೆ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ 1 ಹಸಿಮೆಣಸಿನಕಾಯಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಅಚ್ಚಖಾರದ ಪುಡಿ, ಸಣ್ಣಗೆ ಹೆಚ್ಚಿದ 1 ಟೊಮೆಟೋ, ಕಾಲು ಚಮಚ ಅರಿಶಿನ, ಅರ್ಧ ಚಮಚ ಗರಂ ಮಸಾಲಾ, 2 ಕಪ್ ನಷ್ಟು ಸಣ್ಣಗೆ ಪುಡಿಪುಡಿ ಮಾಡಿಟ್ಟುಕೊಂಡ ಪನೀರ್, 1 ಚಮಚ ಕಸೂರಿ ಮೇಥಿ, 2 ಚಮಚದಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು.

Storage tips: ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮೀನನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇಡಲು ಈ ವಿಧಾನ ಬಳಸಿ…!

ತಯಾರಿಸುವ ವಿಧಾನ : ದೊಡ್ಡ ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ. ಅದು ಚಟಪಟ ಅಂದಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಕೈಯ್ಯಾಡಿಸಿ. ನಂತ ಅಚ್ಚಖಾರದ ಪುಡಿ, ಅರಿಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿ 1 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ನಂತರ ಪುಡಿ ಮಾಡಿಟ್ಟುಕೊಂಡ ಪನೀರ್ ಹಾಕಿ. ಪನೀರ್ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ ಸುಮಾರು ಮೂರು ನಿಮಿಷ ಬಿಡಿ. ಪನೀರ್ ಅನ್ನು ಅತಿಯಾಗಿ ಹುರಿಯಬೇಡಿ, ಹಾಗೆ ಮಾಡಿದರೆ ಪನೀರ್ ಗಟ್ಟಿಯಾಗಿಬಿಡುತ್ತದೆ. ನಂತರ ಕಸೂರಿ ಮೇಥಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿದರೆ ಪನೀರ್ ಬುರ್ಜಿ ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...