Kannada Duniya

ಅರ್ಧ ಬೆಲೆಯಲ್ಲಿ ಸಿಗುತ್ತೆ ಐಷಾರಾಮಿ ಕಾರ್

ಐಷಾರಾಮಿ ಕಾರಿನ ಬಗ್ಗೆ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಅಂತಹ ಆಸೆ, ಕನಸುಗಳು ಕೈಗೂಡುವ ಕಾಲ ಬಂದಿದೆ.

ಐಷಾರಾಮಿ ಕಾರ್ ಮರ್ಸಿಡೆಸ್ ಬೆಂಜ್ ಕಾರ್ ಶೇ. 50 ರಷ್ಟು ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಾಗುತ್ತದೆ.

ಐಷಾರಾಮಿ ಕಾರ್ ಗಳ ತಯಾರಕರಾದ ಜರ್ಮನ್ ಮೂಲದ ಪೋರ್ಶೆ ಮತ್ತು ಮರ್ಸಿಡೆಸ್ ಬೆಂಜ್ ಎ.ಎಂ.ಜಿ. ಕಂಪನಿಗಳು ಭಾರತದ ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ ರೂಪಿಸಿವೆ.

ಎಂಟ್ರಿ ಲೆವೆಲ್ ಮಾಡೆಲ್ ಕಾರ್ ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಕಡಿಮೆ ಬೆಲೆಯಲ್ಲಿ ಭಾರತೀಯ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಲಿವೆ.

ಆರ್ 4, 718 ಬಾಕ್ಸ್ ಸ್ಟರ್, 718 ಕೆಮನ್ ಕಾರ್ ಗಳನ್ನು ಪೋರ್ಶೆ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಹಳೆಯ ಕಾರ್ ಗಳಿಗೆ ಹೋಲಿಸಿದರೆ, ಇವುಗಳ ಬೆಲೆ ಸುಮಾರು ಶೇ. 23 ರಷ್ಟು ಕಡಿಮೆಯಾಗಲಿದೆ. ಹೊಸ ಕಾರ್ 2 – ಲೀಟರ್ ಎಂಜಿನ್ ಹೊಂದಿದ್ದರೆ, ಹಳೆಯ ಕಾರ್ 3 –ಲೀಟರ್ ಎಂಜಿನ್ ಆಯ್ಕೆ ಹೊಂದಿವೆ.

ಮರ್ಸಿಡೆಸ್ ಬೆಂಜ್ ಕಂಪನಿ ಎಸ್ 43 ಎ.ಎಂ.ಜಿ,, ಎಸ್.ಎಲ್.ಸಿ. 43 ಎ.ಎಂ.ಜಿ ಮತ್ತು ಜಿ.ಎಲ್. ಇ 43 ಕಾರ್ ಗಳನ್ನು ಬಿಡುಗಡೆ ಮಾಡಿದ್ದು, ಇವು 63 ಎ.ಎಂ.ಜಿ. ಸೀರಿಸ್ ಕಾರ್ ಗಳಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಬೆಲೆಗೆ ಸಿಗಲಿವೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!

Related News


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...