Kannada Duniya

ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್….

‘ಟ್ರಂಪ್ ಮೋಟರ್ ಸೈಕಲ್ಸ್ ಇಂಡಿಯಾ’ ತನ್ನ ಹೊಚ್ಚ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಅತ್ಯಾಧುನಿಕ ಬೈಕ್ ನ ಹೆಸರು ‘Triumph Bonneville Bobber’. ಈ ಹೈಫೈ ಬೈಕ್ ನ ಬೆಲೆ ಎಷ್ಟಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದರ ಬೆಲೆ ದೆಹಲಿಯ ಶೋ ರೂಮ್ ನಲ್ಲಿ ಅಂದಾಜು 12 ಲಕ್ಷ ರೂಪಾಯಿ ಆಗಲಿದೆ.

ಬ್ರಿಟಿಷ್ ಕಂಪನಿ Triumph Bonneville ತಯಾರಿಸಿರುವ ಬೈಕ್ ಗಳ ಪೈಕಿ ಟಾಪ್ ಮಾಡೆಲ್ ಇದಾಗಿದ್ದು, ಅತ್ಯಂತ ಆಕರ್ಷಕ ಲುಕ್ ಹೊಂದಿದೆ. 5ನೇ ಬಾರಿಗೆ ಹೊಸ ಮಾದರಿಯ ಬೈಕನ್ನು ಕಂಪನಿ ರಸ್ತೆಗೆ ಇಳಿಸ್ತಾ ಇದೆ. 60 ನೇ ದಶಕದ ವಿನ್ಯಾಸವೇ ಇದರ ಸ್ಪೆಷಾಲಿಟಿ. ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಬೊಬ್ ಹಾಗೂ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬೊಬ್ ಬೈಕ್ ಗಳಿಗೆ ಇದು ಟಕ್ಕರ್ ಕೊಡಲಿದೆ.

ಈ ಬೈಕ್ 1200 ಸಿಸಿ ಎಂಜಿನ್ ಹೊಂದಿದೆ. ಅತ್ಯಂತ ಹಳೆಯ ವಿನ್ಯಾಸದ, ಹೊಸ ತಂತ್ರಜ್ಞಾನ ಹೊಂದಿರೋ ಸ್ಟೈಲಿಶ್ ಬೈಕ್ ವಾಹನ ಸವಾರರನ್ನು ಸೆಳೆಯೋದ್ರಲ್ಲಿ ಅನುಮಾನವೇ ಇಲ್ಲ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!

Related News


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...