Kannada Duniya

ದುಬೈ ಪೊಲೀಸ್ ಬಳಿ ಇದೆ ಅತ್ಯಂತ ವೇಗದ ಪೆಟ್ರೋಲ್ ಕಾರ್

ದುಬೈ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದ್ರೆ ದುಬೈ ಪೊಲೀಸ್ ಬಳಿ ಇರುವ Bugatti Veyron ಪೆಟ್ರೋಲ್ ಕಾರನ್ನು ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪೊಲೀಸ್ ಕಾರ್ ಎಂದು ಕರೆಯಲಾಗಿದೆ.

ದುಬೈ ಪೊಲೀಸ್ ಬಳಿ ಮೊದಲೇ 14 ಸೂಪರ್ ಫಾಸ್ಟ್ ಕಾರಿದೆ. ಈ ಪಟ್ಟಿಯಲ್ಲಿ Aston Martin One 77 ನಿಂದ ಹಿಡಿದು  Lamborghini Aventador ಮತ್ತು ಫೆರಾರಿ ಎಫ್ ಎಫ್  ಸೇರಿದೆ. ಈಗ ದುಬೈ ಪೊಲೀಸರ ಬಳಿ Bugatti Veyron ಕೂಡ ಇದೆ. ಅತ್ಯಂತ ವೇಗ ಹೊಂದಿರುವ ವಿಶ್ವದ ಎರಡನೇ ಕಾರ್ ಎಂಬ ಪಟ್ಟ ಲಂಬೋರ್ಗಿನಿ ಗಲ್ಲಾರ್ಡೊ LP560-4ಗೆ ಸಿಕ್ಕಿದ್ದು, ಇದು ಇಟಾಲಿಯ್ ಮಿಲಿಟರಿ ಬಳಿ ಇದೆ.

Bugatti Veyron 0-60 ಎಂ ಹೆಚ್ ಪಿ ವೇಗ ತಲುಪಲು 2.5 ಸೆಕೆಂಡ್ ಸಾಕು. ಹಾಗಾಗಿ ಇದನ್ನು ವಿಶ್ವದ ಅತ್ಯಂತ ವೇಗದ ಪೊಲೀಸ್ ಕಾರ್ ಎಂದು ಪರಿಗಣಿಸಲಾಗಿದೆ. ಜನರ ಮುಂದೆ ದುಬೈ ಪೊಲೀಸ್ ಇಮೇಜ್ ಹೆಚ್ಚಿಸಿಕೊಳ್ಳಲು ಪೊಲೀಸ್ ಇಲಾಖೆ ಈ ಕಾರ್ ಬಳಸ್ತಾ ಇದೆ. ದುಬೈ ಪೊಲೀಸ್ ಅಧಿಕೃತ ವೆಬ್ ಸೈಟ್ ನಲ್ಲಿ ಕೂಡ ಇದ್ರ ಬಗ್ಗೆ ಮಾಹಿತಿ ಇದೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...